Index   ವಚನ - 18    Search  
 
ಆರತವಡಗಿತ್ತು, ಸಾರತ ಸವೆಯಿತ್ತು. ಸಂಭ್ರಮ ಸೈವೆರಗಾಯಿತ್ತು. ನಚ್ಚಿಕೆ ನಾಚಿತ್ತು, ಮಚ್ಚಿಕೆ ಮರೆಯಿತ್ತು. ನಿಷ್ಠೆ ನಿರ್ಭಾವಿಸಿ ನಿಸ್ಸಂದೇಹಕ್ಕೊಳಗಾಯಿತ್ತು. ನಮ್ಮ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಖಂಡಿತಪೂಜೆ ಭಂಡಾಯಿತ್ತು.