Index   ವಚನ - 27    Search  
 
ಕಂಗಳ ಮೊಲೆ ಕೂರ್ಮನ ಆಪ್ಯಾಯನ ಉಂಬ ಭೇದವ ಬಲ್ಲವರಾರೊ? ಅರಿಯಬಾರದು. ಘನವನರಿತ ಅಗಮ್ಯನ ನಿಲವನರಿಯಬಾರದು. ಇದರನುವನವಗವಿಸಿ ತೆರಹಿಲ್ಲದಾತ ನಮ್ಮ ಸಿಮ್ಮಲಿಗೆಯ ಚೆನ್ನರಾಮನೆಂಬ ಮಹಾಮಹಿಮನು.