Index   ವಚನ - 30    Search  
 
ಕನಸಿನ ಸಹಸ್ರಾಕ್ಷನೆಚ್ಚತ್ತು ನೋಡಿ ತನ್ನ ನಿಜವನರಿವಾಗ ಕೇಳೆಲೆ ಮರುಳೆ! ದ್ವ್ಯಕ್ಷನಾಗಿ ಅರಿಯದೆ ಮೇಣು ಸಹಸ್ರಾಕ್ಷದಲ್ಲಿ ಅರಿದನೆ ಹೇಳಯ್ಯಾ? ನಿರವಯ ನಿರವದ್ಯ ನಿರ್ವಿಕಾರ ನಿರಂಜನ ಘನಾನಂದಾದ್ವಯ ಪರಿಪೂರ್ಣನಾಗಿ ತನ್ನನರಿವನಲ್ಲದೆ ಮತ್ತೊಂದು ಪರಿಯಲ್ಲಿ ಅರಿಯಬಲ್ಲನೆ ಹೇಳಾ? ಮುನ್ನಿನ ಪರಿಯಲ್ಲಲ್ಲದೆ, ಕೋಹಮ್ಮಿನೆಚ್ಚರಿಂದ ಸೋಹಂ ಭಾವಾದಿಯಲ್ಲದೆ ಜ್ಞಾತೃ ಜ್ಞಾನ ಜ್ಞೇಯ ವಿಹೀನನಾಗಿ ತನ್ನನರಿದಡೆ ಅರಿದ, ಅಲ್ಲದಿದ್ದಡೆ ಅರಿಯದಾತನು. ಇದು ತಪ್ಪದು ಸಿಮ್ಮಲಿಗೆಯ ಚೆನ್ನರಾಮನ ವಚನ.