•  
  •  
  •  
  •  
Index   ವಚನ - 563    Search  
 
ಇಪ್ಪತ್ತೈದು ತತ್ತ್ವದ ಹತ್ತೆಂಬ ದ್ವಾರದಲ್ಲಿ ಬಳಲುವ ವ್ಯರ್ಥಗೇಡಿ ಮನವ ನಾನೇನೆಂಬೆನಯ್ಯಾ? ತನ್ನ ತಾ ತಿಳಿಯಲು ತನಗೆ ತಾನನ್ಯವಿಲ್ಲ ಮರುಳೆ ಮುತ್ತಯ್ಯನ ಬೆಣ್ಣೆಯ, ಶಿಶು ನುಂಗಿತ್ತು. ಮತ್ತೆ ಶಿಶುವಿನ ಸುಖವನೇನೆಂಬೆ ಗುಹೇಶ್ವರಾ?
Transliteration Ippattaidu tattvada hattemba dvāradalli baḷaluva vyarthagēḍi manava nānēnembenayyā? Tanna tā tiḷiyalu tanage tānan'yavilla maruḷe muttayyana beṇṇeya, śiśu nuṅgittu. Matte śiśuvina sukhavanēnembe guhēśvarā?
Hindi Translation पच्चीस तत्व के दस कहने द्वार में थके व्यर्थगेडी मन को मैं क्या कहूँ? अपने आप समझे तो अपना सा दूसरा नहीं पागल । परदादा का माखन शिशु निगला था। और शिशु के सुख को क्या कहूँ गुहेश्वरा ? Translated by: Eswara Sharma M and Govindarao B N
Tamil Translation இருபத்தைந்து தத்துவத்திலுள்ள பத்து எனும் துளைகளில் சுழன்று சோர்வுறும் பயனற்ற மனத்தை என்னென்பேன்? தன்னைத்தான் அறிவதற்குத் தனக்குத் தான் அன்னியன் அல்லவன்றோ மருளே பரம்பொருளை, பேரின்பம் மிக்க குழந்தை துய்த்தது பிறகு குழந்தையின் பேரின்பத்தை என்னென்பேன் மஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಇಪ್ಪತ್ತೈದು ತತ್ವ್ತದ = ಇಪ್ಪತ್ತೈದು ತತ್ವ್ತಗಳಿಂದ ಕೂಡಿದ ದೇಹ; ಅಂಥ ದೇಹದ; ತನಗೆ ತಾನು ಅನ್ಯವಿಲ್ = ತನ್ನ ಸ್ವರೂಪಕ್ಕೆ ಅನ್ಯವಾಗಿ ಆ ಪರಮ ಆನಂದವಿಲ್ಲ; ತನ್ನತಾ ತಿಳಿಯಲು = ತನ್ನ ನಿಜಸ್ವರೂಪವನ್ನು ತಾನು ತಿಳಿಯಲಾಗಿ; ನುಂಗು = ಅನುಭವಿಸು; ಬಳಲುವ = ಪ್ರಯಾಸಪಡುವ; ಬೆಣ್ಣೆ = ಪರಮ ಆನಂದ; ಮರುಳೆ = ಮರುಳು ಮನವೆ; ಮುತ್ತಯ್ಯ = ಸಕಲ ಸೃಷ್ಟತ್ವ್ತಗಳಿಗೂ ಪರಮಮೂಲವಾದ ಪರವಸ್ತು, ಸನಾತನ, ಸತ್ಯ, ಪರಶಿವ; ವ್ಯರ್ಥಗೇಡಿ = ವ್ಯರ್ಥ ಶ್ರಮಿಸಿ ಹಾಳಾಗುವ; ಶಿಶು = ಶರಣ; ಹತ್ತೆಂಬ ದ್ವಾರದಲ್ಲಿ = ಹತ್ತು ದ್ವಾರಗಳಲ್ಲಿ; ಜ್ಞಾನ ಹಾಗೂ ಕ್ರಿಯಾಕರಣಗಳಾದ ಹತ್ತು ಇಂದ್ರಿಯಗಳಲ್ಲಿ ; Written by: Sri Siddeswara Swamiji, Vijayapura