ಹಸಿವರತಲ್ಲದೆ ಪ್ರಸಾದಿಯಲ್ಲ.
ತೃಷೆಯರತಲ್ಲದೆ ಪಾದೋದಕಿಯಲ್ಲ.
ನಿದ್ರೆಯರತಲ್ಲದೆ ಭವವಿರಹಿತನಲ್ಲ.
ಅನಲ ಪವನವರತಲ್ಲದೆ ಪ್ರಾಣಲಿಂಗಿಯಲ್ಲ.
ಇದು ಕಾರಣ, ಗುಹೇಶ್ವರಲಿಂಗವು ಎಲ್ಲರಿಗೆಲ್ಲಿಯದೊ?
Transliteration Hasivaratallade prasādiyalla.
Tr̥ṣeyaratallade pādōdakiyalla.
Nidreyaratallade bhavavirahitanalla.
Anala pavanavaratallade prāṇaliṅgiyalla.
Idu kāraṇa, guhēśvaraliṅgavu ellarigelliyado?
Hindi Translation बिना भूख प्रसादी नहीं।
बिना तृषां पादोदक नहीं ।
बिना निद्रा भवविरहित नहीं।
बिना अनल-पवन प्राणलिंगी नहीं।
इस कारण गुहेश्वरलिंग सबको कहाँ है?
Translated by: Eswara Sharma M and Govindarao B N
Tamil Translation பசி அடங்கினாலன்றி பிரசாதியல்ல
வேட்கையடங்கினாலன்றி திருவடித்
திருநீரை ஏற்க இயலுமோ?
உறக்கம் அடங்கினாலன்றி பிறவியைத்
தடுக்கவியலுமோ? தீ, அடங்கினாலன்றி
பிராணலிங்கியல்ல. எனவே குஹேசுவரலிங்கத்தை
அனைவராலும் அடையவியலுமோ?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನಲ = ಅಗ್ನಿ, ಪ್ರಾಪಂಚಿಕ ತಾಪ; ತೃಷೆ = ಐಂದ್ರಿಯಿಕಸುಖಾಸಕ್ತಿ; ನಿದ್ರೆ = ತಮೋಭಾವ, ಮೋಹಾಂಧಕಾರ; ಪವನ = ವಾಯು, ಚಿತ್ತಚಾಂಚಲ್ಯ; ಹಸಿವು = ಭೋಗಪದಾರ್ಥಗಳನ್ನು ಸಂಪಾದಿಸುವ ಹಾಗೂ ಅನುಭವಿಸುವ ತೀರ್ವ ಬಯಕೆ;
Written by: Sri Siddeswara Swamiji, Vijayapura