Index   ವಚನ - 63    Search  
 
ತಮ ತಮಗೆ ಜ್ಞಾತೃವಿಲ್ಲ ಜ್ಞಾನವಿಲ್ಲ ಜ್ಞೇಯವಿಲ್ಲೆನಲು ಆರಿಗೆ ತೋರೂದೊ? ಜಗವಿನ್ನಾರಿಗೆ ತೋರೂದೊ ನಿನ್ನ? 'ನಿಜಾನಂದಾನುಭಾವಸ್ಯ ಸರ್ವಸಾಕ್ಷಿಕ ಯೋಗಿನಃ' ಎಂದುದಾಗಿ ಇಂತು ಶಬ್ದಾದಿ ಸಕಲ ವಿಷಯಂಗಳೊಳಗಾದ ಜೀವನ್ಮನವೆ ಸರ್ವಸಾಕ್ಷಿಯಾಗಿ ನಿಲಬಲ್ಲಾತನೆ ಸಿಮ್ಮಲಿಗೆಯ ಚೆನ್ನರಾಮ ತಾನೆ!