Index   ವಚನ - 66    Search  
 
ತಾ ಸನ್ಮಾತ್ರನಾಗಿ ಅಸನ್ಮಾತ್ರನೆನಲುಂಟೆ? ತಾ ಚಿನ್ಮಾತ್ರನಾಗಿ ಅಚಿನ್ಮಾತ್ರನೆನಲುಂಟೆ; ತಾ ಸುಖರೂಪನಾಗಿ ಅಸುಖರೂಪನೆನಲುಂಟೆ? ತಾ ನಿತ್ಯನಾಗಿ ಅನಿತ್ಯನೆನಲುಂಟೆ? ತಾ ಪರಿಪೂರ್ಣನಾಗಿ ಅಪರಿಪೂರ್ಣನೆನಲುಂಟೆ? ಏನೆಂಬೆನಯ್ಯಾ, ತತ್ವವನರಿಯದ ಮರುಳುಗಳ! ತಿಳಿದು ನೋಡಿ ತಾನೆಂದು ಇದಿರೆಂದು ಏನೆಂದು ತೋರದ ಸಚ್ಚಿದಾನಂದ ನಿತ್ಯ ಪರಿಪೂರ್ಣನು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.