ಪರಮಸುಖದ ಪರಿಣಾಮದ ಇರವ ಬಲ್ಲವರಾರೊ?
ಅದು ದೊರೆಕೊಳ್ಳದು ನೋಡಾ!
ತನತನಗೆ ತನ್ನ ಇರವ ಲಿಂಗದಲ್ಲಿರಿಸಿ,
ಪರವ ಮನದಲ್ಲಿ ಹಿಡಿದು,
ಇಹ ಪರವೆಂಬುದೊಂದು ಭ್ರಾಂತಳಿದು,
ನಿರತಿಶಯ ಸುಖದೊಳಗೆ ನಿಜವಾಗಿರಬಲ್ಲ
ನಿಮ್ಮ ಶರಣನನುಪಮಪ್ರಸಾದಿ ಗುಹೇಶ್ವರಾ.
Hindi Translationपरम सुख के परिणाम की स्थिति कौन जानता ?
वह मिलता नहीं देखो।
अपने आप की स्थिति लिंग में रखकर पर को मन में पकड़,
इह पर भ्रांति छूटकर,.
निरतिशय सुख में खुद रहा
गुहेश्वरा, तुम्हारा शरण अनुपम प्रसादी है।
Translated by: Eswara Sharma M and Govindarao B N
English Translation
Tamil Translationபேரின்ப விளைவான இருப்பை வல்லவர் யாரோ?
அது தானாகவே கிடைக்கக் கூடியதன்று,
தனக்குத்தானே தன் இருப்பை இலிங்கத்தில் நிறுத்தி,
புரத்தை மனத்தினுள்ளே பிடித்து,
இகபரமெனும் மருளகன்று, சிறந்த பேரின்பத்தில்
இருக்கவல்ல, குஹேசுவரனே, உம்சரணன்
ஈடு இணையற்ற பிரசாதியன்றோ!
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಇರವು = ಅಸ್ತಿತ್ವ; ಇರಿಸು = ಸಮರ್ಪಿಸು; ಇರುವು = ಸ್ವರೂಪ; ಇಹ-ಪರ = ಇದು-ಅದು, ನಾನು-ಅವನು ಎಂಬ ದ್ವಂದ್ವಭಾವ; ತನತನಗೆ = ತನ್ನಷ್ಟಕ್ಕೆ ತನಗೆ, ತನಗೆ ತಾನೆ; ನಿರತಿಶಯ = ಪರಮ; ಪರಮಸುಖದ ಪರಿಣಾಮ = ಶಿವಯೋಗಸಾಧನೆಯ ಅಂತಿಮ ಪರಿಣಾಮವಾಗಿ ದೊರೆವ ಪರಮಸುಖ; ಪರವು = ಪರವಸ್ತು, ನಿಷ್ಕಲಲಿಂಗ; ಹಿಡಿ = ಧರಿಸು, ತುಂಬಿಕೊಳ್ಳು; Written by: Sri Siddeswara Swamiji, Vijayapura