Index   ವಚನ - 76    Search  
 
ದಿಟದಂತೆ ತನು ತನ್ನ ಹಾಂಗೆ ತೋರಿತ್ತಾಗಿ ದೃಷ್ಟ ದೋಷಭ್ರಾಂತಿ. ಎನ್ನ ದಿಟದಂತೆ, ತನು ತನ್ನ ಹಾಂಗೆ ಇಂದ್ರಿಯಕ್ಕೆ ತೋರಿಹದಾಗಿ. ದರ್ಶನದೋಷ ಭ್ರಾಂತಿಯೆಂದು ತಾನು ತಾನೆಂದು ತಾ ನೆನೆಯದಿಹುದಾಗಿ. ದೃಷ್ಟದೋಷ ಭ್ರಾಂತಿಯನೂಹಿಸಿ ಜೀವ ತನ್ನದಿಟವೆಂದು ಬಗೆದಹನಾಗಿ. ತಾನೇನೂ ಎನ್ನ ಕನಸಿನ ಹಾಂಗೆ. ಭ್ರಾತಿಯೇನನೂ ಭೂತಸಾದೃಶ್ಯವನೂ ತಿಳಿದಂದು ನಿಜಗುಣ. ಈ ನಿಜದಲ್ಲಿ ಅರಿದಾಗ ಭೇದವೇನೂ ಇಲ್ಲವಾಗಿ ನಿರ್ಮಾಯ ನಿಜಗುಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.