Index   ವಚನ - 90    Search  
 
ನೇಣಿನಲ್ಲಿ ಹಾವನಿಲ್ಲೆಂದು ಹೇಳುವಂಗೆ ಹಾವಿನಲ್ಲಿ ನೇಣು ಉಂಟಾಗಬಲ್ಲುದೆ ಹೇಳಾ? ಶಿವನಿಂದನ್ಯವೇನೂ ಇಲ್ಲೆಂದು ಬೋಧಿಸುವಂಗೆ ತನು ಕರಣೇಂದ್ರಿಯ ಶಬ್ದಾದಿ ವಿಷಯ ಸಂಸಾರ ಸುಖ ದುಃಖಗಳಾಗಬಲ್ಲವೆ? ಇಲ್ಲದುದ ಕಂಡೆ, ಉಂಟೆಂಬುದತರ್ಕ `ನೇಹನಾ ನಾಸ್ತಿಕಿಂಚನ, ಏಕಮೇವ ನಿರಂತರಂ' ಎಂದುದು ವೇದ. ಶಿವನಿಂದನ್ಯವೇನೂ ಇಲ್ಲ ಎಂದರಿದರಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.