Index   ವಚನ - 104    Search  
 
ಬಲ್ಲೆವು ಬಲ್ಲೆವೆಂದೆಂಬರು, ಬಯಲ ಭ್ರಮೆಗೆ ಬಳಲುತ್ತಿರ್ಪರು. ಹಗಲುಗತ್ತಲೆ ಹಗಲುಗತ್ತಲೆ ಹದಿರ ನುಡಿವ ಚದುರರಿಗೆಲ್ಲಾ ಹಗಲುಗತ್ತಲೆ. ಬಲ್ಲವರನಲ್ಲೆನಿಸಿತ್ತು ಸಿಮ್ಮಲಿಗೆಯ ಚೆನ್ನರಾಮನೆಂಬ ನಾಮದೊಡಕು.