Index   ವಚನ - 107    Search  
 
ಬೆಳಗಿನ ಬೀಜ ಮಹಾಬೆಳಗು ಕತ್ತಲೆಯನೊಳಕೊಂಡು ಕಣ್ದೆರೆವ ಪರಿಯ ನೋಡಾ! ತಿಳಿವಡೆ ಬೆಳಗಲ್ಲ, ಒಳಗೊಳಗೆ ಹೊಳೆವ ಕಳೆ ಇದೇನೊ! ಇದೆಲ್ಲಿಂದ ಹುಟ್ಟಿ, ಇದೆಲ್ಲಿಂದ ತೋರಿತ್ತು! ಅಲ್ಲಿಯೆ ಆಗಾಗಿ ಅಲ್ಲಿಯೇ ಬೆಳೆಯಿತ್ತು. ಸಿಮ್ಮಲಿಗೆಯ ಚೆನ್ನರಾಮನೆಂಬ ಮಹಾಘನಲಿಂಗದಲ್ಲಿಯೆ ಕಾಲೂರಿ ನಿಂದ ಪರಿಯನೇನೆಂಬೆ!