Index   ವಚನ - 110    Search  
 
ಭ್ರಮೆಯ ಭ್ರಮೆಯೆಂದುದಾಗಿ ಬೆನ್ನಿಲ್ಲ ಬಸುರಿಲ್ಲ ನೆಲೆಯಿಲ್ಲದ ಕಾರಣ ಮೇಲಿಲ್ಲಿನ್ನೆಂತೊ! ಉಂಟೆಂಬುದು ಮುನ್ನವೆ ಗುಂಟಕ್ಕೆ ತರಲಿಲ್ಲ. ಇಲ್ಲೆಂಬುದು ಮುನ್ನವೆ ಸೊಲ್ಲಿಂಗೆ ಯುಕ್ತಿ ಎಯ್ದದು. ಹುಟ್ಟು ನಷ್ಟವಿಲ್ಲ; ದೃಷ್ಟವುಳ್ಳ ಮಾತು! ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವಿಲ್ಲಿನ್ನೆಂತೊ!