•  
  •  
  •  
  •  
Index   ವಚನ - 571    Search  
 
ಶಿಷ್ಯನ ಮುಖದಿಂದಾದ ಗುರುವಿಂಗೆ ಶಿಷ್ಯನ ಪ್ರಸಾದ. ಗುರುವಿಂಗಲ್ಲದೆ ಗುರುವಿನ ಪ್ರಸಾದ ಶಿಷ್ಯಂಗಿಲ್ಲ! ಇದು ಕಾರಣ, ಗುರುವೆ ಓಗರ, ಓಗರವೆ ಅರ್ಪಿತ. ಇದನರಿಯದೆ ಪ್ರಸಾದ ಪ್ರಸಾದವೆಂದು ಉಂಡುಂಡು ಸವೆದರಲ್ಲಾ! ಸುಡು ಸುಡು, ಶಬ್ದಸೂತಕರ ಕೈಯಲ್ಲಿ, ಸ್ಥಾವರ ವಿಧಿವಶವಾಯಿತ್ತು ಗುಹೇಶ್ವರಾ.
Transliteration Śiṣyana mukhadindāda guruviṅge śiṣyana prasāda. Guruviṅgallade guruvina prasāda śiṣyaṅgilla! Idu kāraṇa, guruve ōgara, ōgarave arpita. Idanariyade prasāda prasādavendu uṇḍuṇḍu savedarallā! Suḍu suḍu, śabdasūtakara kaiyalli, sthāvara vidhivaśavāyittu guhēśvarā.
Hindi Translation शिष्य के मुख से बने गुरु को शिष्य का प्रसाद । शिष्य का प्रसाद बिना गुरु के, गुरु का प्रसाद शिष्य को नहीं! इस कारण गुरु ही प्रसाद, प्रसाद ही अर्पित प्रसाद प्रसाद कहकर खा खाकर घिसे जला जलाओ, शब्द सूतक के हाथ में स्थावर विधिवश हुआ गुहेश्वरा । Translated by: Eswara Sharma M and Govindarao B N
Tamil Translation சீடனின் முகத்திலிருந்து தோன்றிய குருவிற்கு சீடனின் பிரசாதம், சீடனின் பிரசாதம் குருவிற்கன்றி குருவின் பிரசாதம் சீடனுக்கில்லை! எனவே குருவே படையல், படையலே பிரசாதம் பிரசாதம் பிரசாதமென உண்டுண்டு தேய்ந்தீரன்றோ, சாரத்தை உணராத பகட்டினர் கையிலே நிலைத்தமெய்ப்பொருளும் பிணைப்புற்றது குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಗು = ತೋರಿಬರು; ಮುಖ = ಭಕ್ತಿಮುಖ; ವಿಧಿವಶವಾಗು = ಧಾರ್ಮಿಕ ವಿಧಿ-ನಿಯಮಗಳಿಗೆ ವಶವಾಗು; ಶಬ್ದಸೂತಕರು = ಇಂಗಿತವನರಿಯದೆ ಬರಿ ಶಾಬ್ದಿಕ ಅರ್ಥಕ್ಕೆ ಅಂಟಿಕೊಂಡವರು; ಸ್ಥಾವರ = ದೇವರು; Written by: Sri Siddeswara Swamiji, Vijayapura