•  
  •  
  •  
  •  
Index   ವಚನ - 572    Search  
 
ಒಳಗೆ ನೋಡಿಹೆನೆಂದಡೆ ಒಳಗೆ ನಿರಾಳ. ಹೊರಗೆ ನೋಡಿಹೆನೆಂದಡೆ ಹೊರಗೆ ನಿರಾಳ. ಹೊಲದಲ್ಲಿ ಆವಿಲ್ಲ ಮನೆಯಲ್ಲಿ ಕರುವಿಲ್ಲ. ನೆಲಹಿನ ಮೇಲಣ ಬೆಣ್ಣೆಯ ದೃಷ್ಟವ ನೋಡಾ. ನಾರಿವಾಳದ ಕಾಯೊಳಗಣ ತಿರುಳ ಒಡೆಯದೆ ಮೆಲಬಲ್ಲರು ನಿಮ್ಮ ಶರಣರು ಗುಹೇಶ್ವರಾ.
Transliteration Oḷage nōḍ'̔ihenendaḍe oḷage nirāḷa. Horage nōḍ'̔ihenendaḍe horage nirāḷa. Holadalli āvilla maneyalli karuvilla. Nelahina mēlaṇa beṇṇeya dr̥ṣṭava nōḍā. Nārivāḷada kāyoḷagaṇa tiruḷa oḍeyade melaballaru nim'ma śaraṇaru guhēśvarā.
Hindi Translation अंदर देख कहें तो अंदर निराला। बाहर देख कहें तो बाहर निराला । खेत में गाय नहीं; घर में बछडा नहीं, चौक पर का माखन दीखता देखो ! नारियल का सार बिना फोडे खाये तो शोभा, गुहेश्वरा। Translated by: Eswara Sharma M and Govindarao B N
Tamil Translation அகத்திலே காணின் அகத்திலே தூய்மை, புறத்திலே காணின் புறத்திலே தூய்மை, முற்றத்திலே பசு இல்லை, வீட்டிலே கன்று இல்லை. பிரம்மமண்டலத்தில் அமுதத்தைச் சுவைப்பதைக் காணாய் தெங்கினுள்ளே உள்ள சாரத்தை உடைக்காது உண்ணவியன்றால் அழகன்றோ குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಅವು = ಹಸು, ವಿಷಯಗಳು, ಆಮಿಷಗಳು; ಒಡೆ = ಸೀಳು, ದಂಡಿಸು; ಕರು = ವಿಷಯ ಬಯಕೆ; ತಿರುಳು = ಅಂತರಂಗದೊಳಗೆ ನೆಲೆಸಿದ ನಿಃಕಲಲಿಂಗ; ದೃಷ್ಟ = ಅನುಭವಗತ; ನಾರಿವಾಳ = ತೆಂಗು, ತನು; ನಿರಾಳ = ನಿರಾವಿಲ, ಶುದ್ದ; ನೆಲಹು = ನೆಲು, ಬ್ರಹ್ಮ ಮಂದಿರ; ಬೆಣ್ಣೆ = ಅಮೃತ; ಮನೆ = ಮನ; ಮೆಲ್ಲು = ಅನುಭವಿಸು; ಹೊಲ = ಶರಣನ ಬಾನಿನಂಗಳ; Written by: Sri Siddeswara Swamiji, Vijayapura