Index   ವಚನ - 130    Search  
 
ಶಬ್ದಾದಿ ಸಕಲ ವಿಷಯಗುಣಗಳ ನೀ ರಾಗ ವಿರಾಗಕಾರಣವಾಗಿ ಮನಸಾದಿ ಕರಣೇಂದ್ರಿಯಂಗಳೊಳಗಾದ ಜೀವನ ನಿವಾರಣೆಯ ಮಾಡಯ್ಯಾ. `ನಿಜಾನಂದಾನುಭಾವಸ್ಯ ಸರ್ವಸಾಕ್ಷಿಯಾನ್ ಯೋಗನಾಂ' ಎಂದುದಾಗಿ, ಇಂತು ಶಬ್ದಾದಿ ಸಕಲ ವಿಷಯಂಗಳೊಳಗಾದ ಜೀವನ ಮನವೆ ಸರ್ವಸಾಕ್ಷಿಯಾಗಿ ನಿಲ್ಲಬಲ್ಲಾತನೆ ಸಿಮ್ಮಲಿಗೆಯ ಚೆನ್ನರಾಮ ತಾನೆ.