Index   ವಚನ - 132    Search  
 
ಶಿವಗಣಂಗಳ ಬರವ ಕಂಡು ಕೈಮುಗಿದು ಅಂಜಲೇಬೇಕು. ಶರಣೆನ್ನಲೊಲ್ಲದೀ ಮನವು; ಆಗಿನ ಭಕ್ತಿಯನರಿಯದು, ಬಾಗಿ ಶರಣೆನ್ನಲೊಲ್ಲದೀ ಮನವು. ಆಳ್ದನೆಂದು ನಂಬಿಯೂ ನಂಬದಾಗಿ, ಸಿಮ್ಮಲಿಗೆಯ ಚೆನ್ನರಾಮನೆನ್ನ ಕೇಡ ನೋಡಿ ನಗುತೈದಾನೆ.