Index   ವಚನ - 135    Search  
 
ಸಂಕಲ್ಪವೆಂಬ ಸಂಕಲೆ ಹರಿಯಿತ್ತಲ್ಲಾ! ಕಾಮವೆಂಬ ಕಂಭವ ಕಿತ್ತೀಡಾಡಿತ್ತಲ್ಲಾ! ಮಾಯವೆಂಬ ಮಾವತಿಗನ ಮೀರಿತ್ತು ಆಸೆಯೆಂಬ ಅಂಕುಶಕ್ಕೆ ನಿಲ್ಲದು. ಮಾಯಾಪಾಶವೆಂಬ ಪಾಯದಳ ಅಂಜಿ ಓಡಿತ್ತು. ಮದಗಜವೆಂಬ ಅನೆ ಅಳಿದ ಬಳಿಕ, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಆನೆ ಆನೆ ಎಂಬುದೇನೂ ಇಲ್ಲದೆ ಹೋಯಿತ್ತು.