Index   ವಚನ - 144    Search  
 
ಸಾಕಾರಸ್ವರೂಪಿ ಸಂಗನಬಸವಣ್ಣ ನೋಡಾ. ನಿರಾಕಾರಸ್ವರೂಪಿ ಚನ್ನಬಸವಣ್ಣ ನೋಡಾ. ನಿರ್ವಯಲ ಪರವಸ್ತುಸ್ವರೂಪಿ ಪ್ರಭುದೇವರು ನೋಡಾ. ಇಂತೀ ಮೂವರ ಕಾರುಣ್ಯ ಪ್ರಸಾದವ ಕೊಂಡು ಮೀರಿದ ಘನವಾದೆನು ಸಿಮ್ಮಲಿಗೆಯ ಚೆನ್ನರಾಮನಲ್ಲಿ.