ಸುರರಿಗೆ ನಿರಂತರ ಜಾಗ್ರ,
ಮರುಳುಗಳಿಗೆ ನಿರಂತರ ಸ್ವಪ್ನ,
ಅಚರಜೀವಿಗಳಿಗೆ ನಿರಂತರ ಸುಷುಪ್ತಿ,
ವರ ಯೋಗಿಗಳಿಗೆ ನಿರಂತರ ತುರ್ಯ.
ಸ್ಥೂಲ ಸೂಕ್ಷ್ಮ ಕಾರಣವ ಪ್ರಾಪ್ತಿಸುವ ತನು
ತನ್ನ ಮಾಯಾತನುವಾಗಿ ಮಾಯೆ ತೋರುತ್ತಿಪ್ಪುದು.
ಸಕಲ ತನುರಹಿತ ನೀನೆಂದು
ಸಕಲ ಮಾಯೆ ಹುಸಿಯೆಂದು
ತನ್ನ ತನ್ನಿಂದರಿದ ಪರಮಾರೂಢ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ.