Index   ವಚನ - 151    Search  
 
ಹುಸಿಯ ವ್ಯಾಧನು ನಿಜದಿಂದ ಕ್ಷತ್ರಿಯನೆಂದು ಬೋಧಿಸಲು ಬೋಧೆ ದೊರಕೊಂಬುದಲ್ಲದೆ ಎಲೆ ಕ್ಷತ್ರಿಯ ನೀ ವ್ಯಾಧನೆಂದು ಬೋಧಿಸಲು ಬೋಧೆ ದೊರಕೊಂಬುದೆ ಹೇಳಾ! ಜೀವ ಭೋಕ್ತೃ ನಿಜ ಪರಮನೆಂದೆನ್ನದೆ ಪರಮನೆ ಹುಸಿ ಜೀವನೆ ದಿಟವೆಂದು ಬೋಧಿಸಲು ಬೋಧೆ ದೊರಕೊಳ್ಳದು ನೋಡಾ! ಜ್ಞಾತೃ ಜ್ಞಾನ ಜ್ಞೇಯಾದಿ ಜ್ಞಪ್ತಿ ಸುಖ ಪರಿಪೂರ್ಣನಲ್ಲ "ಕೋಯಮಾತ್ಮಾನಾನೃತೋಸ್ತಿ ಯಸ್ಮಿನ್ನೇಕಮೇವಾ ದ್ವಿತೀಯಂ ತತ್ವಮಸಿ" ಎಂದುದು ವೇದ, ಸಿಮ್ಮಲಿಗೆಯ ಚೆನ್ನರಾಮಾ.