•  
  •  
  •  
  •  
Index   ವಚನ - 58    Search  
 
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ, ಗಗನದಿಂದ ಮೇಲೆ ಅನುಭಾವ ತಾನಿಲ್ಲ. ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ: ಹೊರಗಣ ಹೊರಗನು ಅರಿಯಬಲ್ಲವರಿಲ್ಲ. ಹಿಂದಣ ಹಿಂದನು, ಮುಂದಣ ಮುಂದನು, ತಂದು ತೋರಿದ ನಮ್ಮ ಗುಹೇಶ್ವರನು.
Transliteration Pātāḷadindatta māta ballavarilla, gaganadinda mēle anubhāva tānilla. Oḷagaṇa jyōtiya beḷaga ballavarilla: Horagaṇa horaganu ariyaballavarilla. Hindaṇa hindanu, mundaṇa mundanu, tandu tōrida nam'ma guhēśvaranu.
Music Courtesy:
Hindi Translation पाताल के उस पार बोली कोई नहीं जानता । गगन के उस पार अनुभाव कुछ भी नहीं। अंदर की ज्योति की चमक कोई नहीं जानता । बाहर का अस्तित्व कोई नहीं जानता। प्राचीन का प्राचीन, नवीन का नवीन हमारे गुहेश्वर ने लाकर दिखाया । Translated by: Eswara Sharma M and Govindarao B N
Tamil Translation பாதாள ஆழத்திலுள்ளதைக் குறித்து பேசுபவரில்லை, ஆகாயத்தைத் தாண்டியுள்ளதை உணர்ந்தவருமில்லை, அகத்திலுள்ள சுடரைத் திகழச் செய்பவரில்லை, புறத்தின் புறத்திலுள்ளதை அறிந்தவர் எவருமில்லை தொடக்கக்திற்குத் தொடக்கமாகி, விரிந்து பரந்துள்ளதை ஸ்ரீகுருவானவர் அருளினார் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಒಳಗಣ = ದೇಹ, ಮನಸ್ಸು ಮತ್ತು ಜೀವಭಾವ; ಗಗನ = ಈ ವಿಶ್ವದ ಮೇಲ್ಮಿತಿ; ಪಾತಾಳ = ಈ ವಿಶ್ವದ ಕೆಳಮಿತಿ; ಮುಂದಣ ಮುಂದೆ = ಸೃಷ್ಟಿಯ ಅಂತ್ಯದ ಆಚೆ; ಹಿಂದಣ ಹಿಂದೆ = ಸೃಷ್ಟಿಯ ಆದಿಯ ಆಚೆ; Written by: Sri Siddeswara Swamiji, Vijayapura