Index   ವಚನ - 49    Search  
 
ಒಡಲುಗೊಂಡೆನಾಗಿ ಮೃಡ! ನಿಮಗೆ ಹಗೆಯಾದೆನಯ್ಯ. ಆನು ಒಡಲುಗೊಂಡಡೇನು? ಕಡಲೊಳಗಣ ಬೊಬ್ಬಳಿಕೆ ಕಡಲೊಳಗೆ ಅಳಿವಂತೆ ಎನ್ನ ಒಡಲಳಿದು ಹೋದಡೇನು? ಪ್ರಾಣ ನಿಮ್ಮ ಎಡೆಯಲಡಗುವದಯ್ಯಾ, ರಾಮನಾಥ.