Index   ವಚನ - 59    Search  
 
ಕಣ್ಣು ಮೀಸಲು ಶಿವನ; ಕೈ ಮೀಸಲು ಶಿವನ. ಕಾಲು ಮೀಸಲು ಶಿವನ; ನಾಲಗೆ ಮೀಸಲು ಶಿವನ. ಕಿವಿ ಮೀಸಲು ಶಿವನ; ನಾಸಿಕ ಮೀಸಲು ಶಿವನ. ತನು ಮನವೆಲ್ಲಾ ಮೀಸಲು ಶಿವನ. ಈ ಮೀಸಲು ಬೀಸರವಾಗದಂತಿರ್ದಡೆ ಆತನೇ ಜಗದೀಶ ಕಾಣಾ! ರಾಮನಾಥ.