Index   ವಚನ - 60    Search  
 
ಕತ್ತೆ ಬಲ್ಲುದೆ ಕಸ್ತುರಿಯ ವಾಸನೆಯ? ತೊತ್ತು ಬಲ್ಲಳೆ ಗುರುಹಿರಿಯರುತ್ತಮರೆಂಬುದ? ಭಕ್ತಿಯನರಿಯದ ವ್ಯರ್ಥಜೀವಿಗಳು ನಿಮ್ಮವರನೆತ್ತ ಬಲ್ಲರೈ? ರಾಮನಾಥ.