•  
  •  
  •  
  •  
Index   ವಚನ - 584    Search  
 
ಭೂತಳದ ಮತಿವಂತರು ಆತ್ಮನ ಸ್ಥಲವಿಡಿಯಲು ಮಾತು ಮಾಣಿಕವ ನುಂಗಿ; ಜಾತಿ ಧರ್ಮವನುಡುಗಿ, ವ್ರತದ ಭ್ರಮೆಗಳ ಸುಟ್ಟು, ಚಿದ್‌ ಭಸ್ಮವ ಧರಿಸಿ, ಅಣಿಮಾದಿ ಗುಣಂಗಳ ಗತಿಯ ಪಥವನೆ ಮೀರಿ, ಭ್ರಾಂತಳಿದು ಜ್ಯೋತಿ ಬೆಳಗುತ್ತಿದೆ ಗುಹೇಶ್ವರಾ.
Transliteration Bhūtaḷada mativantaru ātmana sthalaviḍiyalu mātu māṇikava nuṅgi; jāti dharmavanuḍugi, vratada bhramegaḷa suṭṭu, cid‌ bhasmava dharisi, aṇimādi guṇaṅgaḷa gatiya pathavane mīri, bhrāntaḷidu jyōti beḷaguttide guhēśvarā.
Hindi Translation भूतल के ज्ञानी आत्मा के स्थल में रहे बात माणिक को निगलकर, जाति धर्म को नाशकर, व्रत के भ्रमों को जलाकर, चित् भस्म धारण कर, अणिमादि गुणों का मति पथ पार कर, भ्रांत नाश होकर ज्योति चमक रही है गुहेश्वरा। Translated by: Eswara Sharma M and Govindarao B N
Tamil Translation உலகிலே அறிவாளர் ஆன்மத் தலத்தில் நிலைத்து ஆன்மஒளி வீசும் சொற்கள், ஜாதி நடைமுறையை அகற்றி, நோன்பின் மருட்சிகளைச் சுட்டு, புனித திருநீற்றையணிந்து, அணிமாபோன்றவற்றின் கதியைமீறி, மருளகன்று பேரொளி ஒளிர்ந்து கொண்டுள்ளது குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಣಿಮಾದಿ ಗುಣಂಗಳು = ಅಣಿಮ, ಮಹಿಮಾದಿ ಮಹಾಸಿದ್ದಿಗಳು; ಆತುಮನ ಸ್ಥಲವಿಡಿ = ಆತ್ಮಾನುಭವದ ಸ್ಥಲವಾದ ಶರಣಸ್ಥಲದಲ್ಲಿ ನೆಲೆಸು; ಉಡುಗು = ತೆಗೆದುಹಾಕು; ಗತಿ = ಅವುಗಳನ್ನು ಸಾಧಿಸಿಕೊಡುವ ಉಪಾಯ; ಚಿತ್ತ ಭಸ್ಮ = ಪವಿತ್ರ ಭಸ್ಮ, ಶಿವಯೋಗಪಥದ ಸಂಕೇತ; ಜಾತಿಧರ್ಮ = ಜಾತಿ ವರ್ಣಾದಿಗಳಿಗೆ ಸಂಬಂಧಿಸಿದ ವಿಶಿಷ್ಟ ಆಚರಣೆಗಳು ಹಾಗೂ ಭಾವಗಳು; ಜ್ಯೋತಿ = ಪರಂಜ್ಯೋತಿ, ಜ್ಯೋತಿರ್ಮಯಲಿಂಗ; ನುಂಗು = ಒಳಗೊಳ್ಳು; ಭ್ರಾಂತಿ = ನಾನು-ಇದು ಎಂಬ ಭೇದಭ್ರಮೆ, ಜೀವ-ಜಗತ್ತು-ಈಶ್ವರ-ಎಂಬ ಭೇದಕಲ್ಲನೆ; ಮತಿವಂತರು = ವಿವೇಕಶೀಲರಾದ ಸಾಧಕರು; ಮಾಣಿಕ = ಆತ್ಮವಸ್ತು, ಚಿಲ್ಲಿಂಗ; ವ್ರತ = ಯಾಗ, ಯಜ್ಞ,ವಿಶಿಷ್ಟ ಪೂಜೆ, ಉಪವಾಸ ಮುಂತಾದ ಧಾರ್ಮಿಕ ಆಚರಣೆಗಳು; ವ್ರತದ ಭ್ರಮೆ = ಕಾಮನಾಪ್ರೇರಿತವಾದ ಆ ವ್ರತಗಳಿಂದಲೇ ಪರಮತೃಪ್ತಿ ದೊರೆಯುವುದು ಎಂಬ ಮಿಥ್ಯಭಾವ; ಸುಡು = ನಾಶಗೊಳಿಸು; Written by: Sri Siddeswara Swamiji, Vijayapura