•  
  •  
  •  
  •  
Index   ವಚನ - 583    Search  
 
ಜೂಜಿನ ವೇಧೆಯುಂಟು ಜಾಗರದ ಬಲವಿಲ್ಲ; ಆಗಲೂ ಗೆಲಲುಂಟೆ ಪ್ರಾಣಪದತನಕ? ರತುನದ ಸರ ಹರಿದು ಸೂಸಿ ಬಿದ್ದಡೆ ಮಾಣಿಕವ ಬೆಲೆಯಿಟ್ಟು ಬಿಲಿತವರಿಲ್ಲ, ಸರ್ಪಿಣಿ ಸರ್ಪನ ನುಂಗಿ, ದೀಪವ ನುಂಗಿತ್ತು ಇದು, ಯೋಗದ ದೃಷ್ಟಾಂತ ಗುಹೇಶ್ವರಾ.
Transliteration Jūjina vēdheyuṇṭu jāgarada balavilla; āgalū gelaluṇṭe prāṇapadatanaka? Ratunada sara haridu sūsi biddaḍe māṇikava beleyiṭṭu bilitavarilla, sarpiṇi sarpana nuṅgi, dīpava nuṅgittu idu, yōgada dr̥ṣṭānta guhēśvarā.
Hindi Translation जुआ की लत है, तन्मयता का बल नहीं; तब भी प्राणपद तक जीत सकता? रत्नहार फटकर बिखरे तो, माणिक्य का दाम रखकर बेचनेवाला नहीं। सर्पिणी सर्प निगलकर दीप को निगला था। यह योग का दृष्टांत गुहेश्वरा! Translated by: Eswara Sharma M and Govindarao B N
Tamil Translation சூதாட்டத்தின் வெறியுளது, கவன ஆற்றலில்லை, உயிருள்ளவரை எப்பொழுதும் வெல்லவியலுமோ? இரத்தினமாலை அறுந்து சிதறி வீழ்ந்தால், மாணிக்கத்தை விலைக்கு விற்றவரில்லை. அகமுகமானமனம் பாம்பை விழுங்கி பேரொளிலிங்கத்தில் இணைந்தது இதுயோகத்திற்கான உதாரணமாம். Translated by: Smt. Kalyani Venkataraman, Chennai
ಶಬ್ದಾರ್ಥಗಳು ಜಾಗರದ ಬಲ = ಅವಧಾನಶಕ್ತಿ; ಜೂಜಿನ ವೇಧೆ = ಜೂಜಿನ ಬಗೆಗಿರುವ ಗೀಳು, ಜೂಜುಗಾರನಲ್ಲಿರುವ ತೀವ್ರ ಹಂಬಲ; ದೀಪ = ಬ್ರಹ್ಮಮಂದಿರದಲ್ಲಿ ಇರುವ ನಿಃಕಲಲಿಂಗ, ಜ್ಯೋತಿರ್ಲಿಂಗ; ನುಂಗು = ಪರಿಗ್ರಹಿಸು; ಪ್ರಾಣಪದತನಕ = ಪ್ರಾಣವಿರುವವರೆಗೆ; ಬಿಲಿ = ಮಾರು, ಕೊಟ್ಟುಬಿಡು; ರತುನದ ಸರ = ರತ್ನಹಾರ; ಸರ್ಪ = ಸುಷುಮ್ನಾಪಥ, ಕುಂಡಲಿನೀಶಕ್ತಿ; ಸರ್ಪಣಿ = ಅಂತರ್ಮುಖವಾದ ಮನಸ್ಸು; ಸೂಸಿಬೀಳು = ಚೆಲ್ಲಿಹೋಗು; Written by: Sri Siddeswara Swamiji, Vijayapura