Index   ವಚನ - 101    Search  
 
ನಂಬಿದ ಚೆನ್ನನ ಅಂಬಲಿಯನುಂಡ. ಕೆಂಬಾವಿಯ ಭೋಗಯ್ಯನ ಹಿಂದಾಡಿ ಹೋದ. ಕುಂಭದ ಗತಿಗೆ ಕುಕಿಲಿರಿದು ಕುಣಿದ. ನಂಬದೆ ಕರೆದವರ ಹಂಬಲನೊಲ್ಲನೆಮ್ಮ ರಾಮನಾಥ.