•  
  •  
  •  
  •  
Index   ವಚನ - 588    Search  
 
ಆಕಾಶವ ನುಂಗಿದ ಸರ್ಪನ ಫಣಿಯ ಮಣಿಯೊಳಗಣ ಕಪ್ಪೆ, ವಾಯುವನಲನ ಸಂಚವ ನುಂಗಿತ್ತದೇನೊ? ರೂಹಿಲ್ಲದ ತಲೆಗೆ, ಮೊಲೆ ಮೂರಾಯಿತ್ತ ಕಂಡೆ! ಉಂಡಾಡುವ ಶಿಶುವಿನ ಕೈಯಲ್ಲಿ ಮಾಣಿಕದಾರತಿಯ ಕಂಡೆ! ಕಾಯವಿಲ್ಲದ ಹೆಣನ ವಾಯವಿಲ್ಲದೆ ಜವನೆಳೆದೊಯ್ದನೆಂಬ ವಾಯಕ್ಕೆ ವಾಯವನೇನೆಂಬೆ ಗುಹೇಶ್ವರಾ!
Transliteration Ākāśava nuṅgida sarpana phaṇiya maṇiyoḷagaṇa kappe, vāyuvanalana san̄cava nuṅgittadēno? Rūhillada talege, mole mūrāyitta kaṇḍe! Uṇḍāḍuva śiśuvina kaiyalli māṇikadāratiya kaṇḍe! Kāyavillada heṇana vāyavillade javaneḷedoydanemba vāyakke vāyavanēnembe guhēśvarā!
Hindi Translation आकाश निगला सर्प फन मणि में मेंढक वायु अनल शरीर निगला था क्या ? बिना आकार शरीर को तीन स्तन देखा ; खा पीकर फिरने वाले शिशु के हाथ में माणिक आरती देखा। बिना शरीर लाश को बिना बाधा काल खींच ले गया इस व्यर्थ को क्या कहुँ गुहेश्वरा ? Translated by: Eswara Sharma M and Govindarao B N
Tamil Translation ஆகாயத்தைச் சூழ்ந்த பாம்பின்தலையில் மணியிலுள்ள தவளை உடலுணர்வை விழுங்கியதன்றோ, உருவமற்ற தலைக்கு மூன்று முலையானதைக் கண்டேன். உண்டாகும் குழந்தையின் கையில் மாணிக்க ஆரத்தியைக் கண்டேன். உடலற்ற பிணத்தை எதுவுமின்றி, யமன் இழுத்துச் சென்றானெனும் பொருளற்ற கூற்றை என்னென்பேன் குஹேசுவரனே? Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಕಾಶ = ತ್ರಿಕೂಟದ ಆಚೆಗಿನ ವ್ಯೋಮಚಕ್ರ, ಶಿವಸದನ; ಇಲ್ಲದೆ = ಇಲ್ಲದೆ ಇದ್ದರೆಯೂ; ಉಂಡಾಡು = ಸವಿದು ಆನಂದಿಸು; ಕಪ್ಪೆ = ಶಿವೋsಹಂ ಎಂಬ ನಿನಾದ; ಕಾಯವಿಲ್ಲದ ಹೆಣ = ಕಾಯಭಾವವಿರಹಿತನಾದ-ಅಕಾಯ ಶರಣ; ಕೈ = ಸದ್ಭಾವ ; ಜವ = ಮೃತ್ಯುದೇವತೆ; ತಲೆ = ಜ್ಞಾನ; ನುಂಗು = ಅಡಗಿಸು; ಫಣೆ = ಶಿರಸ್ಸು, ತುಟ್ಟತುದಿ; ಮಣಿ = ಶಿವತತ್ವ್ತ; ಮಾಣಿಕದಾರತಿ = ಶಿವಕಳೆ; ಮೊಲೆ ಮೂರು = ತ್ರಿವಿಧ ಅನುಭವ; ರೂಹು = ಆಕಾರ, ವಿಕಲ್ಪ; ವಾಯ = ಏನೇನೂ; ವಾಯಕ್ಕೆ ವಾಯ = ನಿರರ್ಥಕ; ವಾಯು ಅನಲನ ಸಂಚ = ಭೌತಿಕವಾದ ದೇಹ; ಶಿಶು = ಶರಣ; ಸರ್ಪ = ಊರ್ಧ್ವ ಮನಸ್ಸು, ಸುನಿರ್ಮಲವಾದ ಚಿತ್ತ; Written by: Sri Siddeswara Swamiji, Vijayapura