ಹತ್ತು ಬಣ್ಣದ ಗಿಡುವಿಂಗೆ, ಹತ್ತೆಲೆ,
ಹತ್ತು ಹೂ, ಹತ್ತು ಕಾಯಾಯಿತ್ತು.
ಹತ್ತು ಹತ್ತು ಘನದಲ್ಲಿ ಅಳವಟ್ಟು,
ಹತ್ತು ಹತ್ತು ಆಚಾರಕ್ರಮದಲ್ಲಿ ವಿಚಾರವ ಕಾಣಬಲ್ಲಡೆ
ಆ ಕಾಯ ಲಿಂಗಮಯವಹುದು ಕಾಣಾ ಗುಹೇಶ್ವರಾ.
Hindi Translationदस रंग के पौधे को
दस पत्ते, दस फूल, दस फल हुए।
दस दस घन में मिलकर
दस दस आचार क्रम में विचार देख सके तो,
वह शरीर लिंगमय बनेगा देखो गुहेश्वरा।
Translated by: Eswara Sharma M and Govindarao B N
English Translation
Tamil Translationபத்து வண்ணமுள்ள மரத்திலே
பத்துஇலை, பத்துமலர், பத்துகாயாயிற்று.
பத்து பத்தை இறைக்கு அர்ப்பித்து,
பத்து பத்தை ஆசாரமுறையில் இறைவனைக்
காணவியன்றால், அவ்வுடல் இலிங்கமயமாயிற்று,
காணாய் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಆಚಾರಕ್ರಮ = ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ-ಎಂಬ ಈ ಕ್ರಮ; ಕಾಣು = ದರ್ಶಿಸು, ಅನುಭವಿಸು; ಘನ = ವಿಶ್ವದೊಳಗೆಲ್ಲ ತುಂಬಿದ ವಿಶ್ವಾತ್ಮ; ಲಿಂಗಮಯ = ಲಿಂಗದಿಂದ ತುಂಬಿಹೋದುದು; ವಿಚಾರ = ಜ್ಞಾನರೂಪ ಚಿಲ್ಲಿಂಗ, ಪರಮಾತ್ಮ; Written by: Sri Siddeswara Swamiji, Vijayapura