•  
  •  
  •  
  •  
Index   ವಚನ - 595    Search  
 
ಆದಿಯಲ್ಲಿ ಶಿವದಾರವ ಕಂಡೆ; ಬೀದಿಯಲ್ಲಿ ಬಿದ್ದ ಸೆಜ್ಜೆಯ ಕಂಡೆ. ಪ್ರಾಣಲಿಂಗವ ಬೈಚಿಟ್ಟುಕೊಂಡೆ. ಕಾಯವಳಿದು ಜೀವ ನಿಮ್ಮಲ್ಲಿಗೆ ಬಂದಡೆ ಎನ್ನಿಂದ ವ್ರತಗೇಡಿಗಳಿಲ್ಲ ಗುಹೇಶ್ವರಾ.
Transliteration Ādiyalli śivadārava kaṇḍe; bīdiyalli bidda sejjeya kaṇḍe. Prāṇaliṅgava baiciṭṭukoṇḍe. Kāyavaḷidu jīva nim'mallige bandaḍe enninda vratagēḍigaḷilla guhēśvarā.
Hindi Translation आदि में शिवदार देखा; गली में गिरा करंडक देखा। प्राणलिंग को छिपाकर रखा। शरीर नाश होकर जीव तुम्हारे पास आये तो मुझसे व्रतगेडी कोई नहीं गुहेश्वरा। Translated by: Eswara Sharma M and Govindarao B N
Tamil Translation ஆதியில் சிவதாரத்தைக் கண்டேன், வீதியில் விழுந்த உடலைக் கண்டேன், பிராணலிங்கத்தை மறைத்து வைத்தேன், உடல் அழிந்து ஜீவன் உம்மிடம் வந்தால், என்னைவிட நோன்பை முழுமையாக நூற்றோர் எவருமில்லை குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಆದಿಯಲ್ಲಿ = ಎಲ್ಲದರ ಮೂಲನಾದವನ ಶಿವ, ಅವನ ಜ್ಞಾನ ಮತ್ತು ಸ್ಮರಣೆಗಳಲ್ಲಿ; ಬಿದ್ದ = ರಚನೆಗೊಂಡ; ಬೀದಿಯಲ್ಲಿ = ಪ್ರಕೃತಿಯ ಮಡಿಲಲ್ಲಿ; ಬೈಚಿಡು = ಹೊರಗೆ ಕಾಣದಂತೆ ರಹಸ್ಯವಾಗಿರಿಸು; ವ್ರತಗೆಡು = ವ್ರತವು ಪೂರ್ಣಗೊಂಡು ನಿಂತುಹೋಗು; ಸೆಜ್ಜೆ = ಲಿಂಗದ ಕರಡಿಗೆ, ದೇಹ; Written by: Sri Siddeswara Swamiji, Vijayapura