Index   ವಚನ - 14    Search  
 
ಆವ ಸ್ವಕಾಯದಿಂದಾದಡು ಆಗಲಿ ಭಾವಶುದ್ಧವಾಗಿ ಮಾಡುವ ಜಂಗಮಪೂಜೆ, ಸೂರ ಹುಲ್ಲು ಚುಳುಕೋದಕ ನೇಮ ಕ್ರೀತಪ್ಪದೆ ಮಾಡುವುದೆ ದೇವಪೂಜೆ. ಆವ ಪ್ರಸಂಗ ಬಂದಡೆ ಖಂಡಸಿ ನುಡಿವುದೆ ಪಂಡಿತನಿರವು. ತ್ರಿವಿಧ ಬಂದು ಮುಂದಿರಲಿಕ್ಕೆ ಅದರಂದವ ನೋಡದಿಪ್ಪುದೆ ನಿಸ್ಸಂಗ ಸುಸಂಗಿಯ ಇರವು. ಇಂತೀ ವಿಚಾರವನರಿದಲ್ಲಿ ಢಕ್ಕೆಯ ದನಿ ಹೊರಗಾಯಿತ್ತು. ಕಾಲಾಂತಕ ಭೀಮೇಶ್ವರಲಿಂಗವು ಒಳಗಾಯಿತ್ತು.