Index   ವಚನ - 22    Search  
 
ಎಂದಿದ್ದರೂ ಶರೀರ ಹುಸಿಯೆಂಬುದನರಿದ ಮತ್ತೆ, ತ್ರಿವಿಧಕ್ಕೆ ಕೊಂಡಾಡಲೇತಕ್ಕೆ? ಇದಿರಿಟ್ಟು ಮಾಡುವ ಮಾಟದಲ್ಲಿ ಶ್ರುತ ದೃಷ್ಟ ಅನುಮಾನದಲ್ಲಿ ಅರಿದ ಮತ್ತೆ ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನವ ಕೊಟ್ಟು ನಿರ್ಮುಕ್ತನಾಗಿರ್ಪ ಭಕ್ತನೆ ಕಾಲಾಂತಕ ಭೀಮೇಶ್ವರಲಿಂಗವು ತಾನೆ.