Index   ವಚನ - 23    Search  
 
ಎನ್ನ ಮನವೆ ಬಸವಣ್ಣನು. ಎನ್ನ ಬುದ್ಧಿಯೆ ಚನ್ನಬಸವಣ್ಣನು. ಎನ್ನ ಚಿತ್ತವೆ ಸಿದ್ಧರಾಮಯ್ಯನು. ಎನ್ನ ಅಹಂಕಾರವೆ ಮಡಿವಾಳಯ್ಯನು. ಎನ್ನ ಕ್ಷಮೆಯೆ ನಿಜಗುಣದೇವರು. ಎನ್ನ ದಮೆಯೆ ಘಟ್ಟಿವಾಳಯ್ಯನು. ಎನ್ನ ಶಾಂತಿಯೆ ಅಜಗಣ್ಣನು. ಎನ್ನ ಸೈರಣೆಯೆ ಪ್ರಭುದೇವರು. ಎನ್ನ ಹರುಷವೆ ಏಳುನೂರೆಪ್ಪತ್ತು ಅಮರಗಣಂಗಳು. ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ, ಕಾಲಾಂತಕ ಭೀಮೇಶ್ವರಲಿಂಗವೆ.