Index   ವಚನ - 24    Search  
 
ಕವಿಯ ಹುಗತೆ, ಗಮಕಿಯ ಸಂಚ, ವಾದಿಯ ಚೊಕ್ಕೆಹ, ವಾಗ್ಮಿಯ ಚೇತನ, ಇಂತೀ ಚತುಷ್ಟಯದಲ್ಲಿ ಯುಕ್ತಿವಂತನಾದಡೇನು? ಭಕ್ತಿಯನರಿಯಬೇಕು, ಸತ್ಯದಲ್ಲಿ ನಡೆಯಬೇಕು, ವಿರಕ್ತಿಯಲ್ಲಿ ವಿಚಾರಿಸಿ ನಿಲ್ಲಬೇಕು. ಈ ಗುಣ ಢಕ್ಕೆಯ ಬೊಮ್ಮನ ಭಕ್ತಿ ಕಾಲಾಂತಕ ಭೀಮೇಶ್ವರಲಿಂಗವನರಿವವನ ಸದ್ಭಕ್ತಿ ಯುಕ್ತಿ.