Index   ವಚನ - 34    Search  
 
ಜಾಗ್ರಾವಸ್ಥೆಯಲ್ಲಿ ಸುಳಿಹುದೋರಿದ ಶಕ್ತಿ ಸ್ವಪ್ನಾವಸ್ಥೆಗೆ ತಲೆದೋರಿದ ಮತ್ತೆ ಬೇರೊಂದು ಭಯಕ್ಕೆ ಕಟ್ಟುಂಟೆ? ಆಸೆಯೆಂಬುದೆ ಮಾರಿ, ನಿರಾಸೆಯೆಂಬುದೆ ದೇವಪದ. ದೇವನ ನೆನೆದು ಕಾಯಕವ ಮಾಡಿದಲ್ಲಿ ಆವ ಪದಕ್ಕೂ ಸುಖ, ಕಾಲಾಂತಕ ಭೀಮೇಶ್ವರಲಿಂಗವ ಕುರಿತು ಮಾಡಿದಲ್ಲಿ.