Index   ವಚನ - 35    Search  
 
ತನಗೆ ಇದಿರಿಟ್ಟು ಕಾಬುದೆಲ್ಲವು ತನಗೆ ಅನ್ಯದೈವ. ತಾ ಕುರುಹಳಿದು ತನಗೆ ಅನ್ಯವೆಂಬುದೊಂದಿಲ್ಲವಾಗಿ ಅದು ತನಗೆ ಭಿನ್ನವಿಲ್ಲದ ದೈವ. ಅಹಂಕಾರವೆಂಬ ಆತ್ಮಘಟದ ಮಾರಿಯ ಹೊತ್ತು ಉಲುಹೆಂಬ ಢಕ್ಕೆಯ ಹಿಡಿದು ಭವಭವವೆಂಬ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ, ಢಕ್ಕೆಯ ದನಿಯ ಬಿಡಿಸು, ಕಾಲಾಂತಕ ಭೀಮೇಶ್ವರಲಿಂಗ.