Index   ವಚನ - 40    Search  
 
ತಾ ತಂದ ತನುವೆಲ್ಲವು ದೋಷ, ಆ ತನುವಿನಲ್ಲಿ ಬಂದ ಮನವೆಲ್ಲವು ಪ್ರಕೃತಿ. ಅದಕ್ಕೆ ಇದಿರಿಟ್ಟು ತೋರಿದ ತ್ರಿವಿಧಮೂರ್ತಿಯ ಪರುಷ ಪಾಷಾಣವನಿದಿರಿಟ್ಟಂತೆ ತಮ ಜ್ಯೋತಿಯನಿದಿರಿಟ್ಟಂತೆ ಅರಿವು ಮರವೆಯನರಿವುದಕ್ಕೆ ಇದಿರಿಟ್ಟುಕುರುಹ ಕೊಂಡು ಬಂದೆ. ಮರೆಯದಿರಕ್ಕನೆ, ಮರವೆಯಲ್ಲಿ ಢಕ್ಕೆ ಧಿಕ್ಕರಿಸುತ್ತದೆ. ಕಾಲಾಂತಕ ಭೀಮೇಶ್ವರಲಿಂಗವನರಿಯ ಹೇಳಿ.