Index   ವಚನ - 43    Search  
 
ತ್ರಿವಿಧ ದೇವ ಕುಲಜಾತಿಗಾದಡೂ ಆಗಲಿ ಪಂಡಿತ ವಿದಗ್ಧ ಜಾಣ ಗಾಂಭೀರ ಸಂಪದನಾದಡೂ ಆಗಲಿ ಯಾಚಕತನದಲ್ಲಿ ಘಾತಕತನದಿಂದ ಬೇಡುವುದೆ ಜೀವನ. ಆ ಜೀವನವ ಮರೆದು ಒರಗಿದುದೆ ಮಾರಿ. ಆ ಮರವೆಯ ಹರಿದುದೆ ಕಾಲಾಂತಕ ಭೀಮೇಶ್ವರ ಲಿಂಗವು.