Index   ವಚನ - 42    Search  
 
ತುಂಬಿದ ಹರುಗುಲದಲ್ಲಿ ಒಬ್ಬಂಬಿಗನ ಆಸೆಯಿಂದ ಬೆಂಬಳಿಯಲ್ಲಿ ಹೋಹರಂತೆ ಸಕಲೇಂದ್ರಿಯವೆಂಬ ಅಂಗದ ಹರಿಗುಲದಲ್ಲಿ ಲಿಂಗವೆಂಬ ಅಂಬಿಗನ ದೆಸೆಯಲ್ಲಿ ಹೋಹ ಬೆಂಬಳಿಯ ತೋರಯ್ಯಾ, ಕಾಲಾಂತಕ ಭೀಮೇಶ್ವರಲಿಂಗವೆ.