Index   ವಚನ - 46    Search  
 
ಧ್ಯಾನದಿಂದ ವಸ್ತು, ವಿಷಯದಿಂದ ಮೋಹ, ಭಾವಶುದ್ಧದಿಂದ ಗುರು, ದ್ವಂದ್ವವಳಿದು ನಿಂದುದು ಲಿಂಗ, ತ್ರಿವಿಧದ ಸಂದನಳಿದು ಸಲೆ ಸಂದುದು ಜಂಗಮ. ಈ ಸ್ಥಲದ ಅಂಗವನರಿದು ಉಭಯ ಭಂಗವಿಲ್ಲದೆ ಸುಸಂಗದಿಂದ ಮಾಡುವುದು ಭಕ್ತಿಸ್ಥಲ. ನಿಶ್ಚಯವಾಗಿ ನಿಂದುದು ಕಾಲಾಂತಕ ಭೀಮೇಶ್ವರಲಿಂಗಕ್ಕೆ ನಿಶ್ಚಯಿಸಿದ ಉಭಯ ಭಾವ.