Index   ವಚನ - 49    Search  
 
ಪರ್ಣದ ಮರೆಯ ಫಲದಂತೆ, ಬಣ್ಣದ ಮರೆಯ ಬಂಗಾರದಂತೆ, ತಂತು ಚರ್ಮಂಗಳಲ್ಲಿ ತೋರುವವನ ಗತಿಯಂತೆ. ಕಾಯದಲ್ಲಿ ಸುಳುಹುದೋರುತ್ತ. ಭಾವದಲ್ಲಿ ಪರವನಾಚರಿಸುತ್ತ ಕಾಯದ ಮರೆಯಲ್ಲಿ ತಿರುಗಾಡುವ ಭಾವಶುದ್ಧಾತ್ಮ ಉಭಯಕ್ಕೆ ಕಾಲಾಂತಕ ಬ್ಥೀಮೇಶ್ವರಲಿಂಗವು ಅವರ ಬಾಗಿಲಲ್ಲಿ ಬಳಸಾಡುತಿಪ್ಪನು.