Index   ವಚನ - 52    Search  
 
ಪೃಥ್ವಿಯೆ ಬೀಜವ ನುಂಗಿದಡುತ್ಪತ್ತಿಯಾಗಬಲ್ಲುದೆ? ಶಿಶುವೆ ಬಸುರಿನಲ್ಲಿ ತಾಯಿ ಅಸುವ ನುಂಗಿದ ಮತ್ತೆ ಶಿಶು ತಾಯ ಉಭಯನಾಮವಡಗಿತ್ತು. ಕ್ರಿಯೆ ತಾಯಿ, ಅರಿವೆ ಶಿಶುವಾಗಿ ಮೂರು ಮೊರದ ಗೋಟಿನಲ್ಲಿ ತಿರುಗಾಡುತ್ತಿದ್ದೇನೆ ಆ ಮರವೆಗೆ ತೆರನ ಹೇಳಾ, ಕಾಲಾಂತಕ ಭೀಮೇಶ್ವರಲಿಂಗವೆ.