ಪಾಷಾಣ ಘಟ್ಟಿಯಾದಲ್ಲಿ ಪ್ರಭೆ ಪ್ರಜ್ವಲಿಸಿತ್ತು.
ಪಾಷಾಣದ ಘಟವಡಗಲಾಗಿ ಪ್ರಭೆ ಪ್ರಕಟಿಸುವುದಿಲ್ಲ.
ಕ್ರೀ ಭಿನ್ನವಾದಲ್ಲಿ ಜ್ಞಾನಕ್ಕೆ ಸುಳುಹಿಲ್ಲ.
ಅದು ಮುಕುರವ ತೊಡೆದ ಮಲದಂತೆ.
ಮಲಕ್ಕೆ ಬೆಳಗುಂಟೆ ಮುಕುರಕ್ಕಲ್ಲದೆ
ಮುಕುರಕ್ಕೆ ಛಾಯೆ, ಮಲಕ್ಕೆ ತಮ.
ಉಭಯದೊದಗನರಿದಲ್ಲಿ ಇಷ್ಟ ಪ್ರಾಣ ಮುಕ್ತಿ.
ಅಂಗದ ಮೊರದ ಮಾರಿಯ ಹೊತ್ತು ಬಂದವನ ಯುಕ್ತಿ
ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ ಇಕ್ಕಿದ ಗೊತ್ತು.
Art
Manuscript
Music
Courtesy:
Transliteration
Pāṣāṇa ghaṭṭiyādalli prabhe prajvalisittu.
Pāṣāṇada ghaṭavaḍagalāgi prabhe prakaṭisuvudilla.
Krī bhinnavādalli jñānakke suḷuhilla.
Adu mukurava toḍeda maladante.
Malakke beḷaguṇṭe mukurakkallade
mukurakke chāye, malakke tama.
Ubhayadodaganaridalli iṣṭa prāṇa mukti.
Aṅgada morada māriya hottu bandavana yukti
kālāntaka bhīmēśvaraliṅgavanarivudakke ikkida gottu.