Index   ವಚನ - 56    Search  
 
ಬ್ರಹ್ಮಪ್ರಳಯವಾದಲ್ಲಿ ತಾ ಕೆಟ್ಟುದಿಲ್ಲ ಮಾರಿ. ವಿಷ್ಣು ಮರಣವಹಲ್ಲಿ ತಾ ಸತ್ತುದಿಲ್ಲ ಮಾರಿ. ರುದ್ರ ಯುಗ ಜುಂಗಂಗಳ ಗೆಲುವಲ್ಲಿ ಮಾಯೆ ಮನಸಿಜನ ಮನವೆಲ್ಲಿತ್ತು ಅಲ್ಲಿದ್ದಳು. ಇಂತೀ ತ್ರಿವಿಧ ಮೂರ್ತಿಗಳಲ್ಲಿ ಮರವೆಯ ದೆಸೆಯಿಂದ ಮಾರಿಯಾಯಿತ್ತು. ಆ ಮಾರಿಯ ಹೊತ್ತು ಭವದ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ. ಢಕ್ಕೆಯ ಉಲುಹಡಗುವುದಕ್ಕೆ ಮೊದಲೆ ಭಕ್ತಿ ಮುಕ್ತಿಯನರಿದು ನಿಶ್ಚಯರಾಗಿ ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ.