Index   ವಚನ - 57    Search  
 
ಬ್ರಹ್ಮಾಂಡದಲ್ಲಿ ತೋರುವ ಗುಣ ಅಂಡದಲ್ಲಿ ಕಲೆನಿಲುವಂತೆ, ಅಂಡದಲ್ಲಿ ಜನಿಸುವ ಗುಣ ಪಿಂಡದಲ್ಲಿ ಪ್ರಮಾಣಿಸುವಂತೆ, ಪಿಂಡದಲ್ಲಿ ಪ್ರಮಾಣಿಸುವ ಗುಣ ಸರ್ವಚೇತನದಲ್ಲಿ ಚೇತರಿಸುವಂತೆ, ಚೈತನ್ಯಾತ್ಮಕ ನೀನೇ, ಕಾಲಾಂತಕ ಭೀಮೇಶ್ವರಲಿಂಗವು ತಾನೆ.