Index   ವಚನ - 61    Search  
 
ಭಕ್ತಸ್ಥಲ ಸಂಗನ ಬಸವಣ್ಣಂಗಾಯಿತ್ತು. ಮಾಹೇಶ್ವರ ಸ್ಥಲ ಮಡಿವಾಳಯ್ಯಂಗಾಯಿತ್ತು. ಪ್ರಸಾದಿಸ್ಥಲ ಚನ್ನಬಸವಣ್ಣಂಗಾಯಿತ್ತು. ಪ್ರಾಣಲಿಂಗಿಸ್ಥಲ ಚಂದಯ್ಯಂಗಾಯಿತ್ತು. ಶರಣಸ್ಥಲ ಘಟ್ಟಿವಾಳಯ್ಯಂಗಾಯಿತ್ತು. ಐಕ್ಯಸ್ಥಲ ಅಜಗಣ್ಣಂಗಾಯಿತ್ತು. ಇಂತೀ ಷಡುಸ್ಥಲಬ್ರಹ್ಮಿಗಳೆಲ್ಲರೂ ಎನ್ನಂಗದ ಮೊರದ ಮಾರಿಯ ಸಂಗಾತದಲೈದಾರೆ. ಆರಂಗದ ಮೂರು ಸಂಗದ ತೋರಿಕೆಯ ತೋರಾ, ಕಾಲಾಂತಕ ಭೀಮೇಶ್ವರಲಿಂಗವೆ.