Index   ವಚನ - 62    Search  
 
ಭ್ರಾಮಕದಲ್ಲಿ ಮಾಡದೆ, ಆಢ್ಯತನಕ್ಕೆ ಮಚ್ಚದೆ ಸ್ತುತಿ ನಿಂದೆಗಳ ಗುರು ಲಿಂಗ ಜಂಗಮದಲ್ಲಿ ವಿಚಾರಿಸದೆ ತಾ ಮಾಡುವ ದ್ರವ್ಯಕ್ಕೆ ವಿಶ್ವಾಸದ ಚಿತ್ತಕ್ಕೆ ಉಭಯವನರಿದು ಮಾಡುವ ಭಕ್ತನ ಬಾಗಿಲೆ ಕಾಲಾಂತಕ ಭೀಮೇಶ್ವರಲಿಂಗದ ಆಶ್ರಯ.