Index   ವಚನ - 72    Search  
 
ಮೂರವಸ್ಥೆಯಲ್ಲಿ ತೋರುವುದು ಸತ್ವಗುಣ. ಆರವಸ್ಥೆಯಲ್ಲಿ ತೋರುವುದು ರಜೋಗುಣ. ಏಳವಸ್ಥೆಯಲ್ಲಿ ತೋರುವುದು ತಮೋಗುಣ. ಇಂತೀ ತ್ರಿವಿಧಾವಸ್ಥೆಯಲ್ಲಿ ತೋರುವವೆಲ್ಲವೂ ಅಪ್ಪುವಿನ ಸಂಚಾರಗುಣ. ಸತ್ವ ರಜ ತಮಂಗಳಲ್ಲಿ ನಿಶ್ಚಯಿಸಿ ನಿಂದುದು ಕಾಲಾಂತಕ ಭೀಮೇಶ್ವರಲಿಂಗದಲ್ಲಿ ಸಲೆ ಸಂದುದು.