ರಸೇಂದ್ರಿಯ ಗಂಧೇಂದ್ರಿಯ ರೂಪೇಂದ್ರಿಯ
ಶಬ್ದೇಂದ್ರಿಯ ಸ್ಪರ್ಶನೇಂದ್ರಿಯ
ಪಂಚೇಂದ್ರಿಯಂಗಳಲ್ಲಿ ಸಲೆ ಸಂದು
ಒಂದರ ಗುಣವ ಒಂದರಿಯದಂತೆ
ಮತ್ತೆ ಏಕೇಂದ್ರಿಯವೆಂದು ಸಂಧಿಸಿ
ಅರ್ಪಿಸುವ ಪರಿಯಿನ್ನೆಂತೊ?
ಆ ಗುಣದ ಸಂಗವನರಿದಲ್ಲಿ
ಇಂದ್ರಿಯಂಗಳ ಮುಖದಲ್ಲಿ ಲಿಂಗವನರಿದುದು.
ಹುಟ್ಟಿನ ದೆಸೆಯಿಂದ ಹಸ್ತಕ್ಕೆ ಬಂದು
ಮತ್ತೆ ಜಿಹ್ವೆ ಅರಿದಂತೆ ಅರ್ಪಿತದ ಭೇದ.
ಇಷ್ಟ ಪ್ರಾಣಸಂಗ ಕಾಲಾಂತಕ
ಭೀಮೇಶ್ವರಲಿಂಗವನರಿವುದಕ್ಕೆ
ಅರ್ಪಿತ ಅವಧಾನಿಯ ಇರವು.
Art
Manuscript
Music
Courtesy:
Transliteration
Rasēndriya gandhēndriya rūpēndriya
śabdēndriya sparśanēndriya
pan̄cēndriyaṅgaḷalli sale sandu
ondara guṇava ondariyadante
matte ēkēndriyavendu sandhisi
arpisuva pariyinnento?
Ā guṇada saṅgavanaridalli
indriyaṅgaḷa mukhadalli liṅgavanaridudu.
Huṭṭina deseyinda hastakke bandu
matte jihve aridante arpitada bhēda.
Iṣṭa prāṇasaṅga kālāntaka
bhīmēśvaraliṅgavanarivudakke
arpita avadhāniya iravu.